Thursday, March 19, 2009

ಜೀವನ ಸಾಕ್ಷಾತ್ಕಾರ...

ಇದು ದೂರ ದೂರ ತೀರ ಯಾನ
ಅಂಟಿಕೊಂಡವರಿಲ್ಲ ಇಲ್ಲಿಗೆ
ಬಿಡಿಸಿಕೊಳ್ಳಲು ಒಂದು ದುಸ್ಸಾಹಸ
ನೂಕು ಜೀವನವ,
ಒಲವ ಬುತ್ತಿಯೊಂದಿಗೆ

ಚಿಂತಿಸಬೇಡ ಇರುವುದನ್ನು ಹೊರತು
ಇರುದುದರ ಕುರಿತು
ವ್ಯಥೆ ಪಡಬೇಡ ಇಂದು ತನವ ಮರೆತು
ನಾಳೆ ತನವ ಬೆರತು

ಅಲ್ಲಿ ನೋಡಿದ ಕಷ್ಟದ ಗಳಿಗೆ
ನನ್ನಲ್ಲಿ ಕೊನೆಯುಸಿರನ್ನು ಉಳಿಸಿದೆ
ಇಲ್ಲಿ ಕಂಡ ಬೆವರಿನ ಗಳಿಕೆ
ನನ್ನ ಅಷ್ಟ ದುಡಿಮೆಗೆ ಶಕ್ತಿ ತುಂಬಿದೆ

ಇದೆ ಏನೋ ಜೀವನ ಸಾಕ್ಷಾತ್ಕಾರ?
ಹೌದಲ್ಲದೆ ಮತ್ತೇನು?